Sri Madhvacharya
।। ಶ್ರೀ ಗುರುಭ್ಯೋ ನಮಃ ।।
ಪ್ರಥಮೋ ಹನುಮನ್ನಾಮ | ದ್ವಿತೀಯೋ ಭೀಮ ಏವಚ |
ಪೂರ್ಣಪ್ರಜ್ಞ ತೃತೀಯಸ್ತು ಭಗವತ್ಕಾರ್ಯ ಸಾಧಕಃ ||
Shivalli Sabha Logo
← Home All Events
📍 Kudupu Zone

ವಾರ್ಷಿಕ ಮಹಾಸಭೆ ಹಾಗೂ ಆಟಿದ ಕೂಟ - 2026. ಕುಡುಪು ವಲಯ

📅 Sunday, 16 Aug 2026 at 11:00 AM
📍 ಶ್ರೀ ಸುಬ್ರಮಣ್ಯ ಭಜನಾ ಮಂಡಲಿ ನೀರುಮಾರ್ಗ
*ಶಿವಳ್ಳಿ ಸಭಾ, ಕುಡುಪು ವಲಯದ ವಾರ್ಷಿಕ ಮಹಾಸಭೆ ಹಾಗೂ ಆಟಿದ ಕೂಟದ ವರದಿ*
ಶಿವಳ್ಳಿ ಸಭಾ (ರಿ) ಮಂಗಳೂರು, ಶಿವಳ್ಳಿ ಸಭಾ ಕುಡುಪು ವಲಯದ ವಾರ್ಷಿಕ ಮಹಾಸಭೆ ಹಾಗೂ ಆಟಿದ ಕೂಟ ಕಾರ್ಯಕ್ರಮವು ದಿನಾಂಕ 16-08- 2026 ರಂದು ಶ್ರೀ ಸುಬ್ರಮಣ್ಯ ಭಜನಾ ಮಂಡಲಿ ನೀರುಮಾರ್ಗ ಇಲ್ಲಿ ನಡೆಯಿತು.
ಶಿವಳ್ಳಿ ಸಭಾ, ಕುಡುಪು ವಲಯದ ವಾರ್ಷಿಕ ಮಹಾಸಭೆ ಹಾಗೂ ಆಟಿದ ಕೂಟದ ವರದಿ
ಶಿವಳ್ಳಿ ಸಭಾ (ರಿ) ಮಂಗಳೂರು, ಶಿವಳ್ಳಿ ಸಭಾ ಕುಡುಪು ವಲಯದ ವಾರ್ಷಿಕ ಮಹಾಸಭೆ ಹಾಗೂ ಆಟಿದ ಕೂಟ ಕಾರ್ಯಕ್ರಮವು ದಿನಾಂಕ 16-08- 2026 ರಂದು ಶ್ರೀ ಸುಬ್ರಮಣ್ಯ ಭಜನಾ ಮಂಡಲಿ ನೀರುಮಾರ್ಗ ಇಲ್ಲಿ ನಡೆಯಿತು.
ಪೂರ್ವಾ ಗಂಟೆ 11ಕ್ಕೆ ಸರಿಯಾಗಿ ವಿಷ್ಣು ಸಹಸ್ರನಾಮ ಪಾರಾಯಣದೊಂದಿಗೆ ಪ್ರಾರಂಭವಾಯಿತು. ಕುಮಾರಿ ರಕ್ಷಾ ಅವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮವು ಪ್ರಾರಂಭವಾಯಿತು. ಆಗಮಿಸಿದ ಅತಿಥಿವರ್ಯರನ್ನು ಸ್ವಾಗತಿಸುತ್ತಾ, ವಲಯದ ಅಧ್ಯಕ್ಷರಾದ ಶ್ರೀ ಶ್ರೀಪತಿ ಭಟ್ ಬರ್ಕೆ ಅವರು ಪ್ರಸ್ತಾವನಾ ಭಾಷಣವನ್ನು ಮಾಡಿದರು.
ದೀಪ ಬೆಳಗಿಸುವುದರೊಂದಿಗೆ ಸಭಾ ಕಾರ್ಯಕ್ರಮ ಶುಭಾರಂಭಗೊಂಡಿತು.
ಕಾರ್ಯದರ್ಶಿ ಶ್ರೀಮತಿ ಸುಜಾತ ಅವರು ಕಳೆದ ವರ್ಷದ ವಾರ್ಷಿಕ ವರದಿಯನ್ನು ಸಭೆಯೆದುರು ಮಂಡಿಸಿದರು ಖಜಾಂಜಿ ಶ್ರೀಮತಿ ಸ್ವರ್ಣ ಲತಾ ಅವರು 2025 - 26 ನೇ ಸಾಲಿನ ಲೆಕ್ಕಪತ್ರವನ್ನು ಮಂಡಿಸಿದರು.
ಬಳಿಕ 2025 - 26 ನೇ ಸಾಲಿನ ಎಸ್.ಎಸ್. ಎಲ್. ಸಿ. ಯ ಅಂತಿಮ ಪರೀಕ್ಷೆಯಲ್ಲಿ 85% ಕ್ಕಿಂತ ಅಧಿಕ ಅಂಕಗಳಿಸಿದ, ಸ್ಕಂದ ಪ್ರಸಾದ್ ಭಟ್ ಮಾಣೂರು, ಶೌರ್ಯ ಎನ್ ಆರ್, ಹಾಗೂ ದ್ವಿತೀಯ ಪಿಯುಸಿಯಲ್ಲಿ 85% ಕ್ಕಿಂತ ಅಧಿಕ ಅಂಕಗಳಿಸಿದ ವಿದ್ಯಾಲಕ್ಷ್ಮಿ ರಾವ್ ಕುಡುಪು, ಪಿ ಎಸ್ ತನ್ಮಯ್ ಬೆರ್ಕೆ, ಹರ್ಷಿತ ಭಟ್ ಬೊಳ್ಮಾರ್ ಗುತ್ತು, ಹಾಗೂ ಅನುರಾಗ ಭಟ್ ಕುಡುಪು ಇವರನ್ನು ಸನ್ಮಾನಿಸಲಾಯಿತು.
ನಮ್ಮ ವಲಯದ ಗೌರವ ಸಲಹೆಗಾರರೂ ಹಾಗೂ ನೂರಾರು ಶಿವಳ್ಳಿ ಬಾಂಧವರ ಕುಲಗುರುಗಳೂ ಕುಲ ಪುರೋಹಿತರೂ ಆದ ವೇದಮೂರ್ತಿ *ಶ್ರೀ ಅನಂತ ಉಪಾಧ್ಯಾಯ, ಸಂಕೇಸ* ಅವರನ್ನು ಗುರುವಂದನೆಯ ಮೂಲಕ ಸನ್ಮಾನಿಸಲಾಯಿತು. ಶ್ರೀ ವಾಸುದೇವ ರಾವ್ ಕುಡುಪು, ಅವರು ಸನ್ಮಾನ ಪತ್ರವನ್ನು ವಾಚಿಸಿದರು. ಬಳಿಕ ವೇದಮೂರ್ತಿ ಶ್ರೀ ಅನಂತಪಾಧ್ಯಾಯ ಅವರು ತಮ್ಮ ಜೀವನಾನುಭವದ ಮಾತುಗಳೊಂದಿಗೆ ಸಭೆಗೆ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಜಗದೀಶ್ ಕೆ ಎಡಪಡಿತ್ತಾಯ ಅವರು, ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, "ಮುಂದಿನ ಜನಾಂಗವಾದ ಈಗಿನ ಮಕ್ಕಳಿಗೆ ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರಲು ತಕ್ಕ ಪ್ರೋತ್ಸಾಹ ಅಗತ್ಯ. ಬೆಳೆಯುತ್ತಿರುವ ಯುವ ಮನಸ್ಸು ಅಡ್ಡ ದಾರಿಯನ್ನು ಹಿಡಿಯದಂತೆ ಸೂಕ್ತ ಮಾರ್ಗದರ್ಶನ ನೀಡುವುದು ಸಹ ಅಗತ್ಯ. ಈ ನಿಟ್ಟಿನಲ್ಲಿ ಶಿವಳ್ಳಿ ಸಭಾವು ಪ್ರತಿಭಾ ಪುರಸ್ಕಾರ, ವೇದ ಶಿಬಿರ- ಮುಂತಾದ ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸಂತೋಷಕರ ವಿಷಯ ಎಂದರು."
ಇನ್ನೋರ್ವ ಅತಿಥಿ ಶ್ರೀ ಲಕ್ಷ್ಮಿ ನಾರಾಯಣ ಭಟ್ ಅವರು ತಮ್ಮ ಅನುಭವ ಹಂಚಿಕೊಳ್ಳುವುದರ ಮೂಲಕ ಶುಭ ಹಾರೈಸಿದರು.
ಆಟಿ ಹುಣ್ಣಿಮೆಯಂದು ಹೊಸ್ತಿಲು ಪೂಜೆ ಮಾಡಿ ಛಾಯಾಚಿತ್ರವನ್ನು ಹಂಚಿಕೊಂಡ ಮಾತೆಯರಲ್ಲಿ ಅದೃಷ್ಟ ಯೋಜನೆ ಮೂಲಕ ಆರಿಸಿ ಬಂದ *ಶ್ರೀಮತಿ ಕಸ್ತೂರಿ ಪ್ರೇಮ ಚಂದ್ರ* ಅವರಿಗೆ, ಹಾಗೂ ಹಾಜರಾತಿ ಸಂಖ್ಯೆಯಲ್ಲಿ ಅದೃಷ್ಟ ಸಂಖ್ಯೆಯನ್ನು ಆರಿಸಿ ಬಂದ ಶ್ರೀಮತಿ *ಶ್ರೀಮತಿ ಪ್ರೇಮಲತಾ* ಅವರಿಗೆ ಬಹುಮಾನವನ್ನು ವಿತರಿಸಲಾಯಿತು. ಜೊತೆಗೆ ಆಟಿಯ ವಿಶೇಷ ಖಾದ್ಯಗಳನ್ನು ತಯಾರಿಸಿ ತಂದ ಎಲ್ಲಾ ಮಾತೆಯರಿಗೂ ಸ್ಮರಣಿಕೆಯನ್ನು ಕೃತಜ್ಞತಾ ಪೂರಕವಾಗಿ ವಿತರಿಸಲಾಯಿತು.
ರಾಧಿಕಾ ಆಚಾರ್ಯ ಅವರು ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಶ್ರೀ ರವೀಶ್ ನಾರ್ಶ ಅವರು ವಂದಿಸಿದರು.
ಶಿವಳ್ಳಿ ಸಭಾ ಕದ್ರಿ ವಲಯ, ತಲಪಾಡಿ ವಲಯ ಹಾಗೂ ಸುರತ್ಕಲ್ ವಲಯದ ಪ್ರತಿನಿಧಿಗಳು ಸಹ ಆಗಮಿಸಿದ್ದರು. ಅವರೆಲ್ಲರಿಗೂ ಧನ್ಯವಾದವನ್ನು ಅರ್ಪಿಸಲಾಯಿತು.
ಮಾತೆಯರು ಪ್ರೀತಿ ಪೂರಕವಾಗಿ ತಮ್ಮ ಕೈಯಾರೆ ತಯಾರಿಸಿ ತಂದ, ಆಟಿಯ ಸಮಯದಲ್ಲಿ ತಯಾರಿಸುತ್ತಿದ್ದ ವಿಶೇಷ ಖಾದ್ಯಗಳನ್ನು ಎಲ್ಲರೊಂದಿಗೆ ಸವಿಯುವುದರ ಮೂಲಕ ಕಾರ್ಯಕ್ರಮವು ಮುಕ್ತಾಯವಾಯಿತು.

🙏 This event has concluded. Thank you to everyone who joined us!
ಈ ಕಾರ್ಯಕ್ರಮ ಮುಗಿದಿದೆ. ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು.

See Upcoming Events
← See all upcoming events