ಶಿವಳ್ಳಿ ಸಭಾ ಪಾವಂಜೆ ವಲಯ ದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ದಿನಾಂಕ 08/08/26 ನೇ ಶನಿವಾರ ಪಾವಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು. ನಂತರ ಶಿವಳ್ಳಿ ಸಭಾ ವಲಯ ಸದಸ್ಯರ ವತಿಯಿಂದ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ ನಡೆದು ವಿಶೇಷ ಆಟಿ ಖಾದ್ಯ ಗಳ ಉಪಾಹಾರ ಕಾರ್ಯಕ್ರಮ ನಡೆಯಿತು.
📝 ಪೂರ್ಣ ವರದಿ — Full Report
ಶಿವಳ್ಳಿ ಸಭಾ ಪಾವಂಜೆ ವಲಯ ದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ದಿನಾಂಕ 08/08/26 ನೇ ಶನಿವಾರ ಪಾವಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಈ ಸಭೆಯಲ್ಲಿ ಶಿವಳ್ಳಿ ಸಭಾ ಕೇಂದ್ರ ವಲಯದ ಕಾರ್ಯದರ್ಶಿ ಶ್ರೀ ಭಾಸ್ಕರ ಭಟ್ ಮಂಗಳಾದೇವಿ, ಶ್ರೀ ಯೋಗೀಶ್ ಮುಚ್ಚಿಂತಾಯ ಹಾಗೂ ಕೃಷ್ಣ ಐತಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಬ್ರಾಹ್ಮಣ ಸಮುದಾಯಕ್ಕೆ ಸಂಘ ರಚನೆ ಹಾಗೂ ಅದರ ಅನಿವಾರ್ಯತೆಗಳನ್ನು ಶ್ರೀ ಭಾಸ್ಕರ ಭಟ್ ಅವರು ವಿವರಿಸಿದರು. ಹಾಗೂ ಪಾವಂಜೆ ವಲಯದ ಸದಸ್ಯರ ಕಾರ್ಯ ಚಟುವಟಿಕೆ ಗಳನ್ನು ಶ್ಲಾಘಿಸಿದರು.
ವಲಯಾಧ್ಯಕ್ಷರಾದ ಶ್ರೀ ಸತೀಶ್ ಭಟ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಖಜಾಂಜಿ ಗುರು ಪ್ರಸಾದ್ ತಂತ್ರಿ ಅವರು ಈ ಸಾಲಿನ ಆಯ ವ್ಯಯ ವಿವರಗಳನ್ನು ಸಭೆಯಲ್ಲಿ ಮಂಡಿಸಿದರು.
ಈ ಬಾರಿಯ SSLC ಮತ್ತು PUC ಪರೀಕ್ಷೆಯಲ್ಲಿ 95% ಅಧಿಕ ಅಂಕ ಪಡೆದ ಸಾತ್ವಿಕ್ ಶಬರಾಯ ಮತ್ತು ಕುಮಾರಿ ಅವನಿ ರಾವ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವಲಯದ ಕಾರ್ಯದರ್ಶಿ ಪ್ರಸನ್ನ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ನಂತರ ಶಿವಳ್ಳಿ ಸಭಾ ವಲಯ ಸದಸ್ಯರ ವತಿಯಿಂದ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ ನಡೆದು ವಿಶೇಷ ಆಟಿ ಖಾದ್ಯ ಗಳ ಉಪಾಹಾರ ಕಾರ್ಯಕ್ರಮ ನಡೆಯಿತು.