ತಲಪಾಡಿ ವಲಯದಿಂದ ನಿವೃತ್ತ ಶಿಕ್ಷಕಿ ಶ್ರೀಮತಿ ಲಕ್ಷ್ಮಿ ಶ್ರೀನಿವಾಸ ಮೂರ್ತಿ ಅವರಿಗೆ ಸನ್ಮಾನ
📝 ಪೂರ್ಣ ವರದಿ — Full Report
ಮಂಗಳೂರು: ಶಿಕ್ಷಕರ ದಿನಾಚರಣೆಯ ಅಂಗವಾಗಿ ಪ್ರತಿವರ್ಷ ವಲಯದ ಅರ್ಹ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ಶಿವಳ್ಳಿ ಸಭಾ ತಲಪಾಡಿ ವಲಯದ ವತಿಯಿಂದ, ಈ ವರ್ಷ ವಲಯದ ಹಿರಿಯ ಸದಸ್ಯೆ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಲಕ್ಷ್ಮಿ ಶ್ರೀನಿವಾಸ ಮೂರ್ತಿ ಅವರನ್ನು ಅವರ ಸ್ವಗೃಹದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕರ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ, ಶ್ರೀಮತಿ ಲಕ್ಷ್ಮಿ ಶ್ರೀನಿವಾಸ ಮೂರ್ತಿ ಅವರ ಶೈಕ್ಷಣಿಕ ಸೇವೆಯನ್ನು ಸ್ಮರಿಸಿ ಗೌರವ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಶಿವಳ್ಳಿ ಸಭಾ ಕೇಂದ್ರಿಯ ಜೊತೆ ಕಾರ್ಯದರ್ಶಿ ಶ್ರೀ ಗಿರೀಶ್ ಭಟ್ ಎಸ್., ತಲಪಾಡಿ ವಲಯ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಉಡುಪ, ವಲಯ ಖಜಾಂಚಿ ಶ್ರೀ ಸುರೇಶ್ ಶಿತ್ತಿಲ್ಲಾಯ, ವಲಯ ಕಾರ್ಯದರ್ಶಿ ಶ್ರೀನಿಧಿ ಸೇರಿದಂತೆ ಸನ್ಮಾನಿತರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.